ಮಲೇಶ್ಯ ಮಾಜಿ ಪ್ರಧಾನಿ ನಜೀಬ್ ಬಂಧನ
ಕೌಲಾಲಂಪುರ, ಜು. 3: ಮಲೇಶ್ಯದ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ಮಾಜಿ ಪ್ರಧಾನಿ ನಜೀಬ್ ರಝಾಕ್ರನ್ನು ಮಂಗಳವಾರ ಬಂಧಿಸಿದ್ದಾರೆ.
64 ವರ್ಷದ ನಜೀಬ್ ವಿರುದ್ಧ ಬುಧವಾರ ಆರೋಪ ಹೊರಿಸಲಾಗುವುದು ಎಂದು ‘1ಎಂಡಿಬಿ’ ಸರಕಾರಿ ನಿಧಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ರಚನೆಯಾಗಿರುವ ಕಾರ್ಯಪಡೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸರಕಾರಿ ನಿಧಿ ಅವ್ಯವಹಾರ ಆರೋಪದಲ್ಲಿ ನಜೀಬ್, ಅವರ ಕುಟುಂಬ ಸದಸ್ಯರು ಮತ್ತು ಅವರ ರಾಜಕೀಯ ಮತ್ತು ವ್ಯಾಪಾರಿ ಆಪ್ತರ ಕುತ್ತಿಗೆಗೆ ಕುಣಿಕೆ ಬಿಗಿಯಾಗುತ್ತಿದೆ.
1ಎಂಡಿಬಿ ನಿಧಿಯಿಂದ ಬಿಲಿಯಗಟ್ಟಳೆ ಡಾಲರ್ ಹಣವನ್ನು ನಜೀಬ್ ಮತ್ತು ಅವರ ಪಟಾಲಾಂ ಲಪಟಾಯಿಸಿದೆ ಎಂದು ಆರೋಪಿಸಲಾಗಿದೆ.
Next Story