ಫಿಲಿಪ್ಪೀನ್ಸ್: ಇನ್ನೋರ್ವ ಮೇಯರ್ ಹತ್ಯೆ
ಮನಿಲಾ (ಫಿಲಿಪ್ಪೀನ್ಸ್), ಜು. 4: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಉತ್ತರದಲ್ಲಿರುವ ಪಟ್ಟಣವೊಂದರ ಮೇಯರ್ರನ್ನು ಬೈಕ್ನಲ್ಲಿ ಬಂದ ಬಂದೂಕುಧಾರಿಗಳು ಮಂಗಳವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನುಯೇವ ಎಸಿಜ ಪ್ರಾಂತದ ರಾಜಧಾನಿಯಲ್ಲಿರುವ ಸರಕಾರಿ ಕಚೇರಿಯಿಂದ 57 ವರ್ಷದ ಮೇಯರ್ ಫರ್ಡಿನಂಡ್ ಬೋಟೆ ತನ್ನ ಚಾಲಕನೊಂದಿಗೆ ಹೊರಬರುತ್ತಿರುವಾಗ ಬಂದೂಕುಧಾರಿಗಳು ಅವರ ಕಾರಿನ ಸಮೀಪ ಬಂದು ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕೇವಲ ಎರಡು ದಿನಗಳ ಹಿಂದೆ ಫಿಲಿಪ್ಪೀನ್ಸ್ನ ಇನ್ನೋರ್ವ ಮೇಯರ್ರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. 72 ವರ್ಷದ ಆಂಟೋನಿಯೊ ಹಲೀಲಿ ಸೋಮವಾರ ದಕ್ಷಿಣ ಮನಿಲಾದ ತನಾವನ್ನಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರ ಎದೆಗೆ ಗುಂಡು ಹಾರಿಸಿದ್ದನು.
Next Story