ಜೆಡಿಯು-ಬಿಜೆಪಿ ಮೈತ್ರಿ ಬಿಹಾರಕ್ಕೆ ಸೀಮಿತ: ನಿತೀಶ್
ಪಾಟ್ನಾ,ಜು.9: ಜೆಡಿಯು-ಬಿಜೆಪಿ ನಡುವೆ ಮೈತ್ರಿಯು ಬಿಹಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು. ಬಿಜೆಪಿಯೊಂದಿಗೆ ಪಕ್ಷದ ಮೈತ್ರಿಯು ಮುಂದುವರಿಯಲಿದೆ ಎಂದು ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯು ರವಿವಾರ ಘೋಷಿಸಿತ್ತು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನಿತೀಶ,ಬಿಹಾರದಲ್ಲಿ ನಾವು(ಜೆಡಿಯು) ಮತ್ತು ಬಿಜೆಪಿ ಜೊತೆಯಾಗಿದ್ದೇವೆ. ಆದರೆ ಬಿಹಾರದ ಹೊರಗೆ ಮೈತ್ರಿ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಉಭಯ ಪಕ್ಷಗಳ ನಡುವೆ ಮೈತ್ರಿಯಿಲ್ಲ ಎಂದರು.
ಇದೇ ವೇಳೆ,ಆರ್ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಜೊತೆ ಜೆಡಿಯು ಮೈತ್ರಿ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು.
Next Story