ವಿಸ್ಕಾನ್ಸಿನ್ನಲ್ಲಿ ಅನಿಲ ಕೊಳವೆ ಸ್ಫೋಟ; 3 ಮಂದಿಗೆ ಗಾಯ
ಮ್ಯಾಡಿಸನ್ (ಅಮೆರಿಕ), ಜು. 11: ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್ ನಗರದಲ್ಲಿ ಸೋಮವಾರ ಪ್ರಾಕೃತಿಕ ಅನಿಲ ಕೊಳವೆಯೊಂದು ಸ್ಫೋಟಿಸಿದ್ದು, ಕನಿಷ್ಠ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ಸುಮಾರು 30,000 ಜನಸಂಖ್ಯೆಯ ಸನ್ ಪ್ಯಾರೀ ಪಟ್ಟಣದಲ್ಲಿ ಅನಿಲ ಸೋರಿಕೆಯಾಗಿದೆ ಎಂಬ ವರದಿಗಳಿಗಳ ಹಿನ್ನೆಲೆಯಲ್ಲಿ, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸಂಜೆ ಸುಮಾರು 6:20ರ ಸುಮಾರಿಗೆ ಕಾರ್ಯಾಚರಣೆಗಿಳಿದರು ಎಂದು ಪೊಲೀಸ್ ಲೆಫ್ಟಿನೆಂಟ್ ಕೆವಿನ್ ಕೊನೊಪ್ಯಾಕಿ ಹೇಳಿದರು.
ಸಂಜೆ ಸುಮಾರು 7:15ಕ್ಕೆ ಪ್ರಬಲ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಫೋಟದ ಬೆನ್ನಿಗೇ ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದವು.
Next Story