ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ; 9 ಪೊಲೀಸರ ಸಾವು
ಕಾಬೂಲ್, ಜು.16: ಇಲ್ಲಿನ ಘಾನಿ ಕಾಹಿಲ್ ಜಿಲ್ಲೆ ಪೊಲೀಸ್ ಚೆಕ್ ಪೋಸ್ಟ್ ಮೇಲೆ ರವಿವಾರ ತಡರಾತ್ರಿ ತಾಲಿಬಾನ್ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ 7 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.
ಇದೇ ವೇಳೆ ಪೊಲೀಸರು 5 ಮಂದಿ ಉಗ್ರರನ್ನು ಕೊಂದು ಹಾಕಿದ್ದಾರೆ ಎಂದು ನಂಗರ್ಹಾರ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರಾದ ಗುಲಾಮ್ ಸನಾಯಿ ಸ್ಟ್ಯಾನಿಕ್ಝಾಯ್ ತಿಳಿಸಿದ್ದಾರೆ.
ನಂಗರ್ಹಾರ್ ನಲ್ಲಿ ಸರಕಾರಿ ಪಡೆ ವೈಮಾನಿಕ ದಾಳಿಯಲ್ಲಿ 20 ಮಂದಿ ಉಗ್ರರನ್ನು ಕೊಲ್ಲಲಾಗಿದೆ.
ನಿನ್ನೆ ಕಾಬೂಲ್ ನ ಸಚಿವಾಲಯದ ಹೊರಗಡೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 7 ಮಂದಿ ಮೃತಪಟ್ಟು 15 ಮಂದಿ ನಾಗರಿಕರು ಗಾಯಗೊಂಡಿದ್ದರು.
ಕಳೆದ ತಿಂಗಳು ಸಚಿವಾಲಯದ ಕಟ್ಟಡದ ಬಳಿ ಆತ್ಮಾಹುತಿ ಬಾಂಬ್ ದಾಳಿಗೆ 12 ಮಂದಿ ಮೃತಪಟ್ಟು 31 ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ಬಹುತೇಕ ಮಂದಿ ಸರಕಾರಿ ಅಧಿಕಾರಿಗಳೆಂದು ತಿಳಿದು ಬಂದಿದೆ.
Next Story