ಟೊರಾಂಟೊದಲ್ಲಿ ಹಲ್ಲೆ: ದ್ವೇಷಾಪರಾಧವಾಗಿ ತನಿಖೆ: ಪೊಲೀಸ್
ಟೊರಾಂಟೊ, ಜು. 19: ಕೆನಡದ ಟೊರಾಂಟೊ ನಗರದ ಉಪನಗರವೊಂದರಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯನ್ನು ದ್ವೇಷಾಪರಾಧವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಹಮ್ಮದ್ ಅಬು ಮರ್ಝೂಕ್ರಿಗೆ ಇಬ್ಬರು ವ್ಯಕ್ತಿಗಳು ಸಮುದಾಯ ಕೇಂದ್ರ ಪಾರ್ಕಿಂಗ್ ಸ್ಥಳವೊಂದರಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಪೀಲ್ ರೀಜನಲ್ ಪೊಲೀಸ್ ಅಧಿಕಾರಿ ಡ್ಯಾನಿ ಮಾರ್ಟಿನಿ ಹೇಳಿದರು.
ಹಲ್ಲೆಗೆ ಸಂಬಂಧಿಸಿ 19 ಮತ್ತು 27 ವರ್ಷಗಳ ಇಬ್ಬರು ವ್ಯಕ್ತಿಗಳನ್ನು ರವಿವಾರ ಬಂಧಿಸಲಾಗಿದ್ದು, ಮೊಕದ್ದಮೆ ದಾಖಲಿಸಲಾಗಿದೆ ಎಂದರು.
ದಾಳಿಯ ಬಳಿಕ, ತನ್ನ ಗಂಡನ ತಲೆ ಬುರುಡೆಯ ಒಂದು ಭಾಗವನ್ನು ವೈದ್ಯರು ತೆಗೆಯಬೇಕಾಯಿತು ಎಂದು ಸಂತ್ರಸ್ತನ ಪತ್ನಿ ಹೇಳಿದ್ದಾರೆ.
Next Story