ಲಂಡನ್ ಮೇಯರ್ ಸ್ಪರ್ಧೆಯಲ್ಲಿ ಭಾರತ ಮೂಲದ ಇಬ್ಬರು
ಲಂಡನ್, ಜು. 20: 2020ರಲ್ಲಿ ಲಂಡನ್ ಮೇಯರ್ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಲೇಬರ್ ಪಕ್ಷದ ಸಾದಿಕ್ ಖಾನ್ ವಿರುದ್ಧ ಸ್ಪರ್ಧಿಸಲು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಸಿದ್ಧಪಡಿಸಿದ 10 ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಭಾರತ ಮೂಲದವರಿದ್ದಾರೆ.
ಲಕ್ನೋ ಸಂಜಾತ ಮಹಿಳಾ ಉದ್ಯಮಿ ರೂಬಿ ಮೆಕ್ಗ್ರೆಗರ್-ಸ್ಮಿತ್ ಮತ್ತು ಬ್ರಿಟಿಶ್ ಸಿಖ್ ರಾಜಕಾರಣಿ ಕುಲ್ವೀರ್ ರೇಂಜರ್ ಚುನಾವಣಾ ಕಣದಲ್ಲಿರುವ ಭಾರತೀಯ ಮೂಲದವರು. ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಈ ಇಬ್ಬರು ಇತರರೊಂದಿಗೆ ಸ್ಪರ್ಧಿಸಲಿದ್ದಾರೆ. ಅಂತಿಮ ಅಭ್ಯರ್ಥಿಯ ಆಯ್ಕೆ ಅಕ್ಟೋಬರ್ನಲ್ಲಿ ನಡೆಯಲಿದೆ.
55 ವರ್ಷದ ರೂಬಿ 10 ವರ್ಷಗಳ ಹಿಂದೆ ‘ಮಿಟೀ ಗ್ರೂಪ್’ ಸ್ಥಾಪಿಸುವ ಮೂಲಕ, ಎಫ್ಟಿಎಸ್ಇ250 ಕಂಪೆನಿಯೊಂದನ್ನು ಆರಂಭಿಸಿದ ಮೊದಲ ಭಾರತ ಮೂಲದ ಮಹಿಳೆಯಾಗಿ ಇತಿಹಾಸ ನಿರ್ಮಿಸಿದರು.
ಕುಲ್ವೀರ್ ರೇಂಜರ್ ಲಂಡನ್ ಮೇಯರ್ ಕಚೇರಿಯಲ್ಲಿ ಸಾರಿಗೆ ಸಲಹಾಕಾರರಾಗಿದ್ದರು.
Next Story