ಕತರ್ ಹಜ್ ಯಾತ್ರಿಗಳಿಗೆ ನೂತನ ಲಿಂಕ್: ಸೌದಿ
ರಿಯಾದ್, ಜು. 21: ಹಜ್ ಯಾತ್ರೆ ಕೈಗೊಳ್ಳಬಯಸುವ ಕತರ್ ಪ್ರಜೆಗಳ ಮನವಿಗಳನ್ನು ಸ್ವೀಕರಿಸಲು ನೂತನ ವೆಬ್ಸೈಟ್ ಲಿಂಕೊಂದನ್ನು ಒದಗಿಸಲಾಗಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ಹಳೆಯ ಲಿಂಕನ್ನು ಕತರ್ ಅಧಿಕಾರಿಗಳು ಬ್ಲಾಕ್ ಮಾಡಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಹಜ್ ನಿರ್ವಹಿಸಬಯಸುವ ಕತರ್ ನಿವಾಸಿಗಳು ನೂತನ ಲಿಂಕ್ https://qh1.Hajj.gov.sa
ನ್ನು ಬಳಸಬಹುದಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಹೇಳಿದೆ.
Next Story