ಸೌದಿ: ಪರಿಸರ ತಂಡಗಳಿಗೆ ಮಹಿಳೆಯರ ನೇಮಕ
ಜಿದ್ದಾ, ಜು. 27: ಪರಿಸರ ತಪಾಸಣಾ ತಂಡಗಳಲ್ಲಿ ಮಹಿಳೆಯರ ನೇಮಕಾತಿಯನ್ನು ಸೌದಿ ಅರೇಬಿಯದ ಹವಾಮಾನ ಮತ್ತು ಪರಿಸರ ಇಲಾಖೆ ಆರಂಭಿಸಿದೆ ಎಂದು ಇಲಾಖೆಯ ಅಧ್ಯಕ್ಷ ಡಾ. ಖಲೀಲ್ ಬಿನ್ ಮುಸ್ಲಿಹ್ ಅಲ್-ತಕಾಫಿ ಹೇಳಿದ್ದಾರೆ.
ಮಾಲಿನ್ಯವನ್ನು ಕಡಿಮೆ ಮಾಡಲು, ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಹಾಗೂ ಜೀವನ ಮಟ್ಟವನ್ನು ಸುಧಾರಿಸಲು ಕೈಗೊಳ್ಳಲಾಗುವ ಪರಿಸರ ತಪಾಸಣೆಗೆ ಆದೇಶಿಸುವ ರಾಜಾಜ್ಞೆಯೊಂದಕ್ಕೆ ಪೂರಕವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸೌದಿ ಅರೇಬಿಯದ ‘ಮುನ್ನೋಟ 2030’ಕ್ಕೆ ಪೂರಕವಾಗಿ ಸಹ್ಯ ಪರಿಸರವನ್ನು ಒದಗಿಸಲು ಇಲಾಖೆಯು ಕೆಲಸ ಮಾಡುತ್ತಿದೆ ಎಂದರು.
Next Story