ಮಗುಚಿಬಿದ್ದ ಬೋಟ್: ಮಕ್ಕಳು ಸೇರಿ ಆರು ಮಂದಿ ಜಲಸಮಾಧಿ
ಸಾಂದರ್ಭಿಕ ಚಿತ್ರ
ಇಸ್ತಾನ್ಬುಲ್, ಜು.29: ಬೋಟ್ವೊಂದು ಮಗುಚಿಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಜಲಸಮಾಧಿಯಾದ ಘಟನೆ ಪಶ್ಚಿಮ ಟರ್ಕಿಯಲ್ಲಿ ರವಿವಾರ ನಡೆದಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆ ತಿಳಿಸಿದೆ.
ಹದಿನಾರು ಮಂದಿಯನ್ನು ಹೊತ್ತು ಗ್ರೀಸ್ನ ಲೆಸ್ಬೊಸ್ ದ್ವೀಪಕ್ಕೆ ಪ್ರಯಾಣಿಸುತ್ತಿದ್ದ ಬೋಟ್ ಸಾಗರ ಮಧ್ಯೆ ಮಗುಚಿಬಿದ್ದಿದೆ. ಪರಿಣಾಮವಾಗಿ ಬೋಟ್ನಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ತಟರಕ್ಷಣಾ ಪಡೆಯ ಸಿಬ್ಬಂದಿ ಒಂಬತ್ತು ಮಂದಿಯನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ವರದಿ ತಿಳಿಸಿದೆ. ಕರಾವಳಿ ರಕ್ಷಣಾ ಪಡೆಯ ಮಾಹಿತಿ ಪ್ರಕಾರ, ಕಳೆದ ಜನವರಿಯಿಂದ ಜುಲೈವರೆಗೆ ಟರ್ಕಿಯ ಮೂಲಕ ಯೂರೋಪ್ಅನ್ನು ದಾಟಲು ಬಯಸಿದ ಕನಿಷ್ಟ 54 ಮಂದಿ ವಲಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
Next Story