ಯುಎಇ: ಕೆಲಸ ಹುಡುಕಲು ಅಕ್ರಮ ವಾಸಿಗಳಿಗೆ 6 ತಿಂಗಳ ವೀಸಾ
ದುಬೈ, ಜು. 30: ವೀಸಾ ಕ್ಷಮಾದಾನ ಯೋಜನೆಯ ಮೂಲಕ ತಮ್ಮ ಅಕ್ರಮ ವಾಸ್ತವ್ಯವನ್ನು ಸರಿಪಡಿಸಲು ಮುಂದಾಗಿರುವ ಯುಎಇಯ ಅಕ್ರಮ ನಿವಾಸಿಗಳು, ಕೆಲಸ ಹುಡುಕುವುದಕ್ಕಾಗಿ 6 ತಿಂಗಳ ತಾತ್ಕಾಲಿಕ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ವಾಸ್ತವ್ಯ ಮತ್ತು ವಿದೇಶ ವ್ಯವಹಾರಗಳ ಮಹಾ ನಿರ್ದೇಶನಾಲಯ (ಜಿಡಿಆರ್ಎಫ್ಎ) ದುಬೈ ಇದರ ಸಹಾಯಕ ಮಹಾ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಖಲಾಫ್ ಅಲ್ ಗೈತ್ ಹೇಳಿದ್ದಾರೆ.
‘‘ಆದಾಗ್ಯೂ, ಆರು ತಿಂಗಳ ಅವಧಿಯಲ್ಲಿ ಅವರಿಗೆ ಕೆಲಸ ಸಿಗದಿದ್ದರೆ ಅವರು ದೇಶವನ್ನು ತೊರೆಯಬೇಕು’’ ಎಂದು ಅವರು ಹೇಳಿದರು.
Next Story