ಯಮನ್ ಮೀನುಗಾರಿಕಾ ಬಂದರು ಮೇಲೆ ಮಿತ್ರಕೂಟ ದಾಳಿ
26 ಸಾವು
ಸನಾ (ಯಮನ್), ಆ. 3: ಯಮನ್ನ ಹುದೈದಾ ನಗರದ ಮೀನುಗಾರಿಕಾ ಬಂದರು ಮತ್ತು ಮೀನು ಮಾರುಕಟ್ಟೆಯೊಂದರ ಮೇಲೆ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಗುರುವಾರ ನಡೆಸಿದ ವಾಯು ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ ಎಂದು ಯಮನ್ ವೈದ್ಯಕೀಯ ಮೂಲಗಳು ಮತ್ತು ನೆರವು ಸಂಸ್ಥೆಗಳು ಹೇಳಿವೆ.
ದಾಳಿಯ ಬಳಿಕ ಗಂಭೀರ ಸ್ಥಿತಿಯಲ್ಲಿ ದಾಖಲಾಗಿರುವ ಸುಮಾರು 50 ಮಂದಿಗೆ ಚಿಕಿತ್ಸೆ ನೀಡಲು ಅಲ್ ತಾವ್ರ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ಕಳುಹಿಸಲಾಗುವುದು ಎಂದು ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ (ಐಸಿಆರ್ಸಿ) ಟ್ವಿಟರ್ನಲ್ಲಿ ತಿಳಿಸಿದೆ.
ತನ್ನ ಪ್ರಧಾನ ದ್ವಾರವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಡಝನ್ಗಟ್ಟಳೆ ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯು ಟ್ವೀಟ್ ಮಾಡಿದೆ.
ಅದೇ ವೇಳೆ, ದಾಳಿಯಲ್ಲಿ 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೌದಿ ಮಾಲೀಕತ್ವದ ಸಬಾ ಸುದ್ದಿ ಸಂಸ್ಥೆ ಹೇಳಿದೆ.
Next Story