ಸೌದಿ: ಭಾರತೀಯನ ಸಾಕ್ಸ್ನಿಂದ 1 ಕೋಟಿ ರೂ. ನಗದು ವಶ
ರಿಯಾದ್, ಆ. 3: ತನ್ನ ಸಾಕ್ಸ್ನಲ್ಲಿ 600000 ರಿಯಾಲ್ (1.09 ಕೋಟಿ ರೂಪಾಯಿ) ಹಣವನ್ನು ಅಡಗಿಸಿ ಕಳ್ಳಸಾಗಣೆ ಮಾಡುತ್ತಿದ್ದ ಭಾರತೀಯ ವಲಸಿಗನೊಬ್ಬನನ್ನು ಸೌದಿ ಅರೇಬಿಯ ಪೊಲೀಸರು ಬಂಧಿಸಿದ್ದಾರೆ.
ಈ ವ್ಯಕ್ತಿಯು ಸೌದಿಯಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಾಗ ಅಲ್ ದಮ್ಮಾಮ್ನಲ್ಲಿರುವ ಕಿಂಗ್ ಫಾಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದರು.
ವಿಮಾನ ನಿಲ್ದಾಣ ಪೊಲೀಸರು ಆತನನ್ನು ವಿಚಾರಣೆಗಾಗಿ ಸುಂಕ ವಿಭಾಗಕ್ಕೆ ಕಳುಹಿಸಿದ್ದಾರೆ.
Next Story