ಅಫ್ಘಾನ್: ಶಿಯಾ ಮಸೀದಿಯಲ್ಲಿ ಆತ್ಮಹತ್ಯಾ ಸ್ಫೋಟ
ಕನಿಷ್ಠ 25 ಸಾವು
ಕಾಬೂಲ್, ಆ. 3: ಪೂರ್ವ ಅಫ್ಘಾನಿಸ್ತಾನದ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ಸೇರಿದವರನ್ನು ಗುರಿಯಾಗಿಸಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಮೃತರಾಗಿದ್ದಾರೆ ಹಾಗೂ ಭಾರೀ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ.
ಹಲವಾರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ ಇನ್ನೂ ಹೆಚ್ಚಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
‘‘ಪಕ್ತಿಯ ಪ್ರಾಂತದ ಗರ್ದೇಝ್ ನಗರದ ಶಿಯಾ ಮಸೀದಿಯೊಂದರ ಒಳಗೆ ಸ್ಫೋಟವೊಂದು ಸಂಭವಿಸಿದೆ’’ ಎಂದು ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಪಕ್ತಿಯ ಪ್ರಾಂತದ ಪೊಲೀಸ್ ಮುಖ್ಯಸ್ಥರು ತಿಳಿಸಿದರು.
ಬಾಂಬ್ಗಳನ್ನು ಸಿಡಿಸುವ ಮೊದಲು ಇಬ್ಬರು ಭಯೋತ್ಪಾದಕರು ಶುಕ್ರವಾರದ ಪ್ರಾರ್ಥನೆಗೆ ಸೇರಿದ ಜನರ ಮೇಲೆ ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
Next Story