ಶತಮಾನದ ಬಾಣಸಿಗ ಜೋಯಲ್ ರೊಬುಚೊನ್ ಇನ್ನಿಲ್ಲ
ಪ್ಯಾರಿಸ್, ಆ. 6: ಶ್ರೇಷ್ಠ ಹೊಟೇಲ್ ಮತ್ತು ರೆಸ್ಟೋರೆಂಟ್ಗಳ ವಾರ್ಷಿಕ ‘ಮಿಚೆಲಿನ್ ಪಟ್ಟಿ’ಯಲ್ಲಿ ಅತಿ ಹೆಚ್ಚು ನಕ್ಷತ್ರ (ಸ್ಟಾರ್)ಗಳನ್ನು ಪಡೆದುಕೊಂಡಿದ್ದ ಬಾಣಸಿಗ ಜೋಯಲ್ ರೊಬುಚೊನ್ ನಿಧನರಾಗಿದ್ದಾರೆ ಎಂದು ಫ್ರಾನ್ಸ್ ಸರಕಾರದ ವಕ್ತಾರರೊಬ್ಬರು ಸೋಮವಾರ ತಿಳಿಸಿದ್ದಾರೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು.
ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದ 1990ರ ‘ಗಾಲ್ಟ್ ಮಿಲೋ’ ಪಟ್ಟಿಯ ಪ್ರಕಾರ ಅವರು ನಾಲ್ವರು ‘ಶತಮಾನದ ಬಾಣಸಿಗ’ರ ಪೈಕಿ ಓರ್ವರಾಗಿದ್ದರು.
ಅವರು ಸರಣಿ ರೆಸ್ಟೋರೆಂಟ್ಗಳನ್ನು ಸ್ಥಾಪಿಸಿದರು. ಅವರ ರೆಸ್ಟರಾಂಟ್ಗಳು ಆಹಾರದ ವಿಷಯದಲ್ಲಿ ಕ್ರಾಂತಿ ಸಾಧಿಸಿದವು. ಈ ರೆಸ್ಟೋರೆಂಟ್ಗಳು ಒಟ್ಟು 31 ಮಿಚೆಲಿನ್ ನಕ್ಷತ್ರಗಳನ್ನು ಪಡೆದುಕೊಂಡಿವೆ.
Next Story