ಪ್ರಸಿದ್ಧ ನಟಿಯನ್ನು ಗುಂಡಿಕ್ಕಿ ಕೊಂದ ಪತಿ
ಇಸ್ಲಾಮಾಬಾದ್, ಆ.9: ಪಾಕಿಸ್ತಾನದ ಪ್ರಸಿದ್ಧ ಗಾಯಕಿ ಹಾಗೂ ನಟಿ ರೇಷ್ಮಾ ಎಂಬವರನ್ನು ಅವರ ಪತಿ ಗುಂಡಿಕ್ಕಿ ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ. ನೌಶೇರಾ ಕಾಲಾನ್ ಪ್ರದೇಶದಲ್ಲಿ ಘಟನೆ ನಡೆದಿದೆ.
ರೇಷ್ಮಾ ಆರೋಪಿಯ ನಾಲ್ಕನೆ ಪತ್ನಿಯಾಗಿದ್ದು, ಸಹೋದರನ ಜತೆ ಹಕೀಂ ಬಾದ್ ಎಂಬಲ್ಲಿ ರೇಷ್ಮಾ ವಾಸವಿದ್ದರು ಎಂದು ಜಿಯೊ ಟಿವಿ ವರದಿ ಮಾಡಿದೆ.
ಕುಟುಂಬ ಕಲಹ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದು, ರೇಷ್ಮಾರ ಸಹೋದರನ ಮನೆಗೆ ಬಂದ ಪತಿ ಗುಂಡಿಕ್ಕಿದ್ದಾನೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದಲ್ಲಿ ಪಾಷ್ತೋ ಹಾಡುಗಳ ಮೂಲಕ ರೇಷ್ಮಾ ಜನಪ್ರಿಯತೆ ಗಳಿಸಿದ್ದರು. ಸೋಬಾಲ್ಗೊಲುನ ಎಂಬ ನಾಟಕದಲ್ಲಿಯೂ ಅವರು ನಟಿಸಿದ್ದರು.
ಪಾಕಿಸ್ತಾನದ ಕೈಬರ್ ಫಕ್ತೂನ್ಕ್ವಾದಲ್ಲಿ ಮಹಿಳೆಯರ ವಿರುದ್ಧ ದಾಳಿ ಘಟನೆಗಳು ಹೆಚ್ಚಳವಾಗುತ್ತಿದ್ದು, ಈ ವರ್ಷ ಇಂತಹ 15ನೆ ಘಟನೆಗಳು ನಡೆದಿವೆ ಎಂದು ಜಿಯೊ ಟಿವಿ ವರದಿ ಮಾಡಿದೆ. ಕಳೆದ ಫೆಬ್ರವರಿಯಲ್ಲಿ ಸುನ್ಬುಲ್ ಎಂಬ ಗಾಯಕಿ ಗುಂಡಿಗೆ ಬಲಿಯಾಗಿದ್ದರು.
Next Story