ಗಾಝಾ ಮೇಲೆ ಇಸ್ರೇಲ್ ದಾಳಿ: ಮಗು, ಗರ್ಭಿಣಿ ತಾಯಿ ಸಾವು
ಜೆರುಸಲೇಂ, ಆ. 9: ಗಾಝಾದ ಮೇಲೆ ಬುಧವಾರ ರಾತ್ರಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಒಂದು ಮಗು ಮತ್ತು ಅದರ ಗರ್ಭಿಣಿ ತಾಯಿ ಸೇರಿದಂತೆ ಮೂವರು ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಗಾಝಾದ ಜಫರವಿಯ ಮೇಲೆ ನಡೆದ ವಾಯು ದಾಳಿಯಲ್ಲಿ ಈ ಸಾವು ನೋವುಗಳು ಸಂಭವಿಸಿವೆ.ಅದೇ ವೇಳೆ, ಗಾಝಾಪಟ್ಟಿಯ ಸುಮಾರು 100 ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಗಾಝಾ ಪಟ್ಟಿಯಿಂದ ಇಸ್ರೇಲ್ ಭೂಭಾಗದತ್ತ ಹಾರಿದ ರಾಕೆಟ್ಗಳಿಗೆ ಪ್ರತಿಯಾಗಿ ಫೆಲೆಸ್ತೀನ್ ನೆಲದ ಮೇಲೆ ದಾಳಿ ನಡೆಸಲಾಗಿದೆ ಎಂದು ಅದು ತಿಳಿಸಿದೆ.
Next Story