ಕೆನಡದಲ್ಲಿ ಗುಂಡಿನ ದಾಳಿ: ಕನಿಷ್ಠ 4 ಸಾವು
ಒಟ್ಟಾವ, ಆ. 10: ಪೂರ್ವ ಕೆನಡದ ನಗರ ಫ್ರೆಡರಿಕ್ಟನ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಕೊನೆಯ ವರದಿಗಳು ಬಂದಾಗ ಗುಂಡಿನ ದಾಳಿ ಮುಂದುವರಿದಿತ್ತು.
2014ರಲ್ಲಿ ನ್ಯೂ ಬ್ರನ್ಸ್ವಿಕ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಾಯಲ್ ಕೆನಡಿಯನ್ ವೌಂಟಡ್ ಪೊಲೀಸ್ನ ಮೂವರು ಅಧಿಕಾರಿಗಳು ಮೃತಪಟ್ಟಿದ್ದರು ಹಾಗೂ ಇಬ್ಬರು ಗಾಯಗೊಂಡಿದ್ದರು. ಅಂದು ಅದು ಕೆನಡದಲ್ಲಿ ನಡೆದ ಭೀಕರ ಗುಂಡಿನ ದಾಳಿಗಳ ಪೈಕಿ ಒಂದಾಗಿತ್ತು.
ಕಳೆದ ತಿಂಗಳು ಟೊರಾಂಟೊದ ರಸ್ತೆಯೊಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು 13 ಮಂದಿ ಗಾಯಗೊಂಡಿದ್ದನ್ನು ಸ್ಮರಿಸಬಹುದಾಗಿದೆ. ಬಳಿಕ ಹಂತಕನು ತನಗೆ ತಾನೇ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡನು.
Next Story