ಕಾಬೂಲ್: ಗುಪ್ತಚರ ಕೇಂದ್ರದ ಮೇಲೆ ದಾಳಿ
ಕಾಬೂಲ್ (ಅಫ್ಘಾನಿಸ್ತಾನ), ಆ. 16: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿರುವ ಗುಪ್ತಚರ ತರಬೇತಿ ಕೇಂದ್ರವೊಂದರ ಮೇಲೆ ಬಂದೂಕುಧಾರಿಗಳು ಗುರುವಾರ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಬೂಲ್ನಲ್ಲಿ ಒಂದು ದಿನದ ಹಿಂದೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟ 34 ಮಂದಿಯ ಅಂತ್ಯಸಂಸ್ಕಾರ ನಡೆಯುತ್ತಿರುವಾಗಲೇ ಹೊಸ ದಾಳಿ ನಡೆದಿದೆ.
‘‘ಗುಂಡಿನ ಚಕಮಕಿ ಮುಂದುವರಿದಿದೆ. ಸ್ಥಳವನ್ನು ಅಫ್ಘಾನ್ ಭದ್ರತಾ ಪಡೆಗಳು ಸುತ್ತುವರಿದಿವೆ’’ ಎಂದು ಕಾಬೂಲ್ ಪೊಲೀಸ್ ವಕ್ತಾರರು ತಿಳಿಸಿದರು.
ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ‘ನ್ಯಾಶನಲ್ ಸೆಕ್ಯುರಿಟಿ ಡೈರೆಕ್ಟೊರೇಟ್’ ನಡೆಸುತ್ತಿರುವ ತರಬೇತಿ ಕೇಂದ್ರವೊಂದರ ಸಮೀಪ ಗುಂಡಿನ ದಾಳಿ ನಡೆದಿದೆ. ಕಟ್ಟಡದ ಸಮೀಪದ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಾರೆ.
Next Story