ಲಂಡನ್ ಬೀದಿಯಲ್ಲಿ ಸೌದಿ ಶ್ರೀಮಂತನ ಚಿನ್ನದ ಕಾರುಗಳ ಪ್ರದರ್ಶನ
ಶ್ರೀಮಂತಿಕೆಯ ದರ್ಪ !
"London's streets are paved with gold ( ಲಂಡನ್ ಬೀದಿಗಳು ಸ್ವರ್ಣ ಲೇಪಿತವಾಗಿವೆ) " ಎಂಬ ಹಳೆ ಮಾತೊಂದಿದೆ. ಆದರೆ ಈ ವಾರ ಆ ಮಾತು ನಿಜವಾಗಿದೆ !
ಮೊನ್ನೇ ಇದ್ದಕ್ಕಿದ್ದಂತೆ ಲಂಡನ್ ನ ಡಬಲ್ ಡೆಕ್ಕರ್ ಬಸ್ಸುಗಳು , ಕಪ್ಪು ಟ್ಯಾಕ್ಸಿಗಳ ನಡುವೆ ನಾಲ್ಕು ಚಿನ್ನದ ಕಾರುಗಳು ಒಂದರ ಹಿಂದೆ ಒಂದರಂತೆ ಬಂದವು ! ಇವು ಲಂಡನ್ ಭೇಟಿಗೆ ಬಂಡ ಸೌದಿಯ ಆಗರ್ಭ ಶ್ರೀಮಂತ ವ್ಯಕ್ತಿಯದ್ದೆಂದು ಹೇಳಲಾಗಿದೆ. ಈ ವಿಲಾಸಿ ಚಿನ್ನ ಲೇಪಿತ ಕಾರುಗಳು 1.8 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಮೌಲ್ಯದವು ಎಂದು ಹೇಳಲಾಗಿದೆ . ಈ ಪೈಕಿ ಒಂದು ಬೃಹತ್ ಆರು ಚಕ್ರಗಳ ಮರ್ಸಿಡಿಸ್ ಕಾರಿಗೆ 534,000 ಡಾಲರ್ ಬೆಲೆ !
ಇವುಗಳಲ್ಲಿ ಗಂಟೆಗೆ 349 ಕಿ ಮಿ ಕ್ರಮಿಸುವ ಒಂದು ಲ್ಯಾಮ್ಬೊರ್ಗಿನಿಯ ಬೆಲೆ 506,000 ಡಾಲರ್ ಗಳು.
Next Story