ನೆತನ್ಯಾಹುರನ್ನು ಇನ್ನೊಮ್ಮೆ ಪ್ರಶ್ನಿಸಿದ ಪೊಲೀಸ್
ಜೆರುಸಲೇಂ, ಆ. 17: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಪೊಲೀಸರು ಅವರನ್ನು ಶುಕ್ರವಾರ ಇನ್ನೊಮ್ಮೆ ಪ್ರಶ್ನಿಸಿದ್ದಾರೆ.
ನೆತನ್ಯಾಹುರ ನಿವಾಸಕ್ಕೆ ಶುಕ್ರವಾರ ಎರಡು ಪೊಲೀಸ್ ವಾಹನಗಳು ಬಂದವು.
ಅದೇ ವೇಳೆ, ಅವರ ನಿವಾಸದ ಎದುರು ಜಮಾಯಿಸಿದ ಹಲವಾರು ಪ್ರತಿಭಟನಕಾರರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಕ್ರೈಮ್ ಮಿನಿಸ್ಟರ್’ ಎಂಬುದಾಗಿ ಬರೆದ ಫಲಕಗಳನ್ನು ಪ್ರದರ್ಶಿಸಿದರು ಹಾಗೂ ನ್ಯಾಯಕ್ಕಾಗಿ ಆಗ್ರಹಿಸುವ ಘೋಷಣೆಗಳನ್ನು ಕೂಗಿದರು.
Next Story