ಐಸಿಸ್ ಉಗ್ರರ ಮೇಲೆ ಇರಾಕ್ ದಾಳಿ: 28 ಸಾವು
ಇರ್ಬಿಲ್ (ಇರಾಕ್), ಆ. 17: ಸಿರಿಯದ ಒಳಗೆ ಐಸಿಸ್ ಭಯೋತ್ಪಾದಕರನ್ನು ಗುರಿಯಾಗಿಸಿ ತನ್ನ ವಾಯುಪಡೆ ಎರಡು ವಾಯು ದಾಳಿಗಳನ್ನು ನಡೆಸಿದೆ ಎಂದು ಇರಾಕ್ ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ಕನಿಷ್ಠ 28 ಭಯೋತ್ಪಾದಕರು ಹತರಾಗಿದ್ದಾರೆ.
ಮುಂದಿನ ವಾರದ ಈದ್ ಈದುಲ್ ಅಝ್ ಹಾ ರಜೆಯ ಸಂದರ್ಭದಲ್ಲಿ ಇರಾಕ್ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಲು ನಿರ್ಧರಿಸಿದ್ದ ಆತ್ಮಹತ್ಯಾ ಬಾಂಬರ್ಗಳ ಸಭೆಯೊಂದನ್ನು ಗುರಿಯಾಗಿಸಿ ಎಫ್-16 ವಿಮಾನವೊಂದು ದಾಳಿ ನಡೆಸಿತು.
ಈ ದಾಳಿಯಲ್ಲಿ ಸುಮಾರು 20 ಉಗ್ರರು ಹತರಾದರು.
ಎರಡನೇ ದಾಳಿಯಲ್ಲಿ 8 ಮಂದಿ ಸತ್ತರು.
Next Story