ಕೋಫಿ ಅನ್ನಾನ್ಗೆ ಸೆಪ್ಟಂಬರ್ 13ರಂದು ಸರಕಾರಿ ಗೌರವದೊಂದಿಗೆ ವಿದಾಯ
ಅಕ್ರ.ಆ.25: ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನೋಬಲ್ ಪುರಸ್ಕೃತ ಕೋಫಿ ಅನ್ನಾನ್ ಅವರ ಮೃತದೇಹವನ್ನು ಸೆಪ್ಟಂಬರ್ 13ರಂದು ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಿ ದಫನ ಮಾಡಲಾಗುವುದು ಎಂದು ಘಾನಾ ಅಧ್ಯಕ್ಷ ನಾನಾ ಅಕುಫೊ ಅಡ್ಡೊ ಶನಿವಾರ ತಿಳಿಸಿದ್ದಾರೆ.
ಅಕ್ರದಲ್ಲಿರುವ ಅನ್ನಾನ್ ಅವರ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಧ್ಯಕ್ಷರು ಈ ಹೇಳಿಕೆಯನ್ನು ನೀಡಿದ್ದಾರೆ. ಘಾನಾದ ಪ್ರಜೆಯಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನ್ನಾನ್ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಜನಜನಿತರಾಗಿದ್ದರು ಎಂದು ಅಡ್ಡೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. 80ರ ಹರೆಯದ ಅನ್ನಾನ್ ಅಲ್ಪಕಾಲದ ಅನಾರೋಗ್ಯದ ನಂತರ ಆಗಸ್ಟ್ 18ರಂದು ನಿಧನರಾಗಿದ್ದರು.
Next Story