ಏಡನ್ ಕೊಲ್ಲಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ
ವಾಶಿಂಗ್ಟನ್, ಆ. 30: ಏಡನ್ ಕೊಲ್ಲಿಯಲ್ಲಿ ದೋಣಿಯೊಂದರಿಂದ ಎಕೆ-47 ರೈಫಲ್ಗಳು ಸೇರಿದಂತೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಅಮೆರಿಕ ನೌಕಾಪಡೆ ವಶಪಡಿಸಿಕೊಂಡಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
‘ಜಾಸನ್ ಡನ್ಹಮ್’ ನೌಕೆಯ ಸಿಬ್ಬಂದಿ ಮಂಗಳವಾರ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ದೋಣಿಯು ಈ ಶಸ್ತ್ರಾಸ್ತ್ರಗಳನ್ನು ಹೇರಿಕೊಂಡು ಎಲ್ಲಿಗೆ ಹೋಗುತ್ತಿತ್ತು ಎಂಬ ಬಗ್ಗೆ ಮಾತನಾಡಲು ಅವರು ನಿರಾಕರಿಸಿದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಏಡನ್ ಕೊಲ್ಲಿಯು ಜಗತ್ತಿನ ಅತ್ಯಂತ ನಿಬಿಡ ನೌಕಾಯಾನ ಮಾರ್ಗಗಳನ್ನು ಹೊಂದಿದೆ. ಇದು ಯುರೋಪ್ ಖಂಡವನ್ನು ಏಶ್ಯ ಮತ್ತು ಮಧ್ಯಪ್ರಾಚ್ಯದೊಂದಿಗೆ ಸಂಪರ್ಕಿಸುತ್ತದೆ.
Next Story