ಹಕ್ಕಾನಿ ನೆಟ್ವರ್ಕ್ ಸ್ಥಾಪಕ ಜಲಾಲುದ್ದೀನ್ ಹಕ್ಕಾನಿ ಸಾವು
ಕಾಬೂಲ್, ಸೆ. 4: ಅಫ್ಘಾನಿಸ್ತಾನದ ಅತ್ಯಂತ ಭಯಾನಕ ಉಗ್ರ ಸಂಘಟನೆಗಳ ಪೈಕಿ ಒಂದಾಗಿರುವ ಹಕ್ಕಾನಿ ನೆಟ್ವರ್ಕ್ನ ಸ್ಥಾಪಕ ಜಲಾಲುದ್ದೀನ್ ಹಕ್ಕಾನಿ ಮೃತಪಟ್ಟಿದ್ದಾನೆ ಎಂದು ಅದರ ಮಿತ್ರ ಉಗ್ರ ಗುಂಪು ಅಫ್ಘಾನ್ ತಾಲಿಬಾನ್ ಮಂಗಳವಾರ ಘೋಷಿಸಿದೆ.
ಸುದೀರ್ಘ ಕಾಯಿಲೆಯ ಬಳಿಕ ಜಲಾಲುದ್ದೀನ್ ಹಕ್ಕಾನಿ ನಿಧನ ಹೊಂದಿದ್ದಾನೆ ಎಂದು ತಾಲಿಬಾನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈಗ ಅವನ ಮಗ ಸಿರಾಜುದ್ದೀನ್ ಹಕ್ಕಾನಿ ತನ್ನ ತಂದೆ ಸ್ಥಾಪಿಸಿದ ಭಯೋತ್ಪಾದಕ ಗುಂಪಿನ ನೇತೃತ್ವ ವಹಿಸಿದ್ದಾನೆ.
ಜಲಾಲುದ್ದೀನ್ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದಲ್ಲಿ ಸಚಿವನೂ ಆಗಿದ್ದನು.
Next Story