ಹೆಲಿಕಾಪ್ಟರ್ ಪತನದಲ್ಲಿ 6 ಮಂದಿ ಮೃತ್ಯು: ಅದೃಷ್ಟವಶಾತ್ ಬದುಕುಳಿದ ಮಹಿಳೆ
ಹೊಸದಿಲ್ಲಿ, ಸೆ.8: ನೇಪಾಳದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಜಪಾನೀ ಟ್ರಕ್ಕರ್ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಓರ್ವ ಮಹಿಳೆ ಬದುಕುಳಿದಿದ್ದಾರೆ.
ಧಾಂಡಿಂಗ್ ಮತ್ತು ನುವಾಕೋಟ್ ಜಿಲ್ಲೆಗಳ ನಡುವಿನ ಪರ್ವತಶ್ರೇಣಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ತ್ರಿಭುವನ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಇಳಿಯಬೇಕಿತ್ತು.
ಹೆಲಿಕಾಪ್ಟರ್ ನಲ್ಲಿ ಜಪಾನಿ ಪ್ರಜೆ ಹಿರೋಮಿ ಕೋಮಟ್ಸು ಸೇರಿದಂತೆ 7 ಮಂದಿಯಿದ್ದರು.
Next Story