ಡಿಸೆಂಬರ್ 10ಕ್ಕೆ ನಿರ್ಧಾರವಾಗಲಿದೆ ಮಲ್ಯ ಭವಿಷ್ಯ
ಲಂಡನ್, ಸೆ.12: ಭಾರತದ ಬ್ಯಾಂಕ್ ಗಳಿಗೆ ಬಹುಕೋಟಿ ಸಾಲ ಬಾಕಿಯಿರಿಸಿರುವ ಉದ್ಯಮಿ ವಿಜಯ್ ಮಲ್ಯರನ್ನು ಬ್ರಿಟನ್ ನಿಂದ ಭಾರತಕ್ಕೆ ಗಡೀಪಾರು ಮಾಡುವ ಬಗ್ಗೆ ಡಿಸೆಂಬರ್ 10ರಂದು ತೀರ್ಪು ಹೊರಬೀಳಲಿದೆ.
ಭಾರತದ ಬ್ಯಾಂಕ್ ಗಳಿಗೆ 1.4 ಬಿಲಿಯನ್ ಡಾಲರ್ ಸಾಲ ಬಾಕಿಯಿರಿಸಿರುವ ವಿಜಯ್ ಮಲ್ಯರನ್ನು ಗಡೀಪಾರು ಮಾಡುವಂತೆ ಭಾರತವು ಒತ್ತಾಯಿಸುತ್ತಲೇ ಬಂದಿದೆ. ಮಲ್ಯ ವಿರುದ್ಧ ಪ್ರಾಥಮಿಕ ವರದಿಯನ್ನು ತಯಾರಿಸಲು ಭಾರತ ವಿಫಲವಾಗಿದೆ ಎಂದು ಮಲ್ಯ ಪರ ವಕೀಲೆ ಕ್ಲೇರ್ ಮೋಟ್ಗೋಮೆರಿ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಹೇಳಿದ್ದಾರೆ.
Next Story