ಅಫ್ಘಾನ್ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ತಾಲಿಬಾನ್ ಉತ್ಸುಕ
ಮಾಸ್ಕೊ, ಸೆ. 20: ರಶ್ಯ ರಾಜಧಾನಿ ಮಾಸ್ಕೊದಲ್ಲಿ ಅಫ್ಘಾನಿಸ್ತಾನದ ಬಗ್ಗೆ ನಡೆಯಲಿರುವ ಬಹುಪಕ್ಷೀಯ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ತಾಲಿಬಾನ್ ಉತ್ಸುಕವಾಗಿದೆ ಎಂದು ರಶ್ಯದ ವಿದೇಶ ವ್ಯವಹಾರಗಳ ಸಚಿವಾಲಯ ಬುಧವಾರ ಹೇಳಿದೆ ಎಂದು ಆರ್ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾತುಕತೆಗಳ ದಿನಾಂಕದ ಬಗ್ಗೆ ಚರ್ಚಿಸಲು ಅಫ್ಘಾನಿಸ್ತಾನದ ಉಪ ವಿದೇಶ ಸಚಿವರು ಮಾಸ್ಕೊಗೆ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ ಎಂದು ಇಲ್ಲಿನ ಅಫ್ಘಾನ್ ರಾಯಭಾರ ಕಚೇರಿ ತಿಳಿಸಿದೆ.
Next Story