ಕಾಯಿಲೆಯಿಂದ ಬಳಲುತ್ತಿದ್ದ ವಿಯೆಟ್ನಾಮ್ ಅಧ್ಯಕ್ಷ ನಿಧನ
ಹನೋಯಿ (ವಿಯೆಟ್ನಾಮ್), ಸೆ. 21: ವಿಯೆಟ್ನಾಮ್ ಅಧ್ಯಕ್ಷ ಟ್ರಾನ್ ಡೈ ಕುವಾಂಗ್ ಅಲ್ಪಕಾಲದ ಅಸೌಖ್ಯದಿಂದ ಬಳಿಕ ಶುಕ್ರವಾರ ನಿಧನರಾಗಿದ್ದಾರೆ ಎಂದು ಸರಕಾರಿ ಟೆಲಿವಿಶನ್ ಮತ್ತು ರೇಡಿಯೊ ಘೋಷಿಸಿವೆ.
‘‘ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ಕುವಾಂಗ್ ದೇಶಿ ಮತ್ತು ವಿದೇಶಿ ವೈದ್ಯರು ಮತ್ತು ಪ್ರೊಫೆಸರ್ಗಳ ಪ್ರಯತ್ನಗಳ ಹೊರತಾಗಿಯೂ ರಾಜಧಾನಿ ಹನೋಯಿಯಲ್ಲಿನ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು’’ ಎಂದು ವಿಯೆಟ್ನಾಮ್ ಟೆಲಿವಿಶನ್ ವರದಿ ಮಾಡಿದೆ.
ವಿಯೆಟ್ನಾಮ್ನಲ್ಲಿ ಸರ್ವೋನ್ನತ ಅಧಿಕಾರಿ ಯಾರೂ ಇಲ್ಲ. ಅಧ್ಯಕ್ಷ, ಪ್ರಧಾನಿ ಮತ್ತು ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರು ದೇಶವನ್ನು ಅಧಿಕೃತವಾಗಿ ಮುನ್ನಡೆಸುತ್ತಾರೆ.
ಕುವಾಂಗ್ರನ್ನು 2016 ಎಪ್ರಿಲ್ನಲ್ಲಿ ಅಧ್ಯಕ್ಷ ಹುದ್ದೆಗೆ ನೇಮಿಸಲಾಗಿತ್ತು. ಅದಕ್ಕೂ ಮೊದಲು ಅವರು ಸಾರ್ವಜನಿಕ ಭದ್ರತೆಯ ಸಚಿವರಾಗಿದ್ದರು.
Next Story