ಪ್ರೇಕ್ಷಕರು ನಕ್ಕಿದ್ದು ‘ಫೇಕ್ ನ್ಯೂಸ್’: ಟ್ರಂಪ್
ನ್ಯೂಯಾರ್ಕ್, ಸೆ. 27: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ನಾನು ಭಾಷಣ ಮಾಡುತ್ತಿದ್ದಾಗ ವಿಶ್ವ ನಾಯಕರು ನಗುತ್ತಿದ್ದರು ಎನ್ನುವ ವರದಿಗಳನ್ನು ‘ಸುಳ್ಳು ಸುದ್ದಿ’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
‘‘ಅವರು ನನ್ನನ್ನು ನೋಡಿ ನಗುತ್ತಿರಲಿಲ್ಲ, ನನ್ನೊಂದಿಗೆ ನಗುತ್ತಿದ್ದರು’’ ಎಂದು ಟ್ರಂಪ್ ಹೇಳಿದರು.
ನನ್ನ ನಾಯಕತ್ವದಲ್ಲಿ ಅಮೆರಿಕ ಆರ್ಥಿಕವಾಗಿ ಬಹಳಷ್ಟು ಅಭಿವೃದ್ಧಿಗೊಂಡಿದೆ ಎಂಬುದಾಗಿ ಟ್ರಂಪ್ ಮಂಗಳವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಹೇಳಿದಾಗ, ನೆರೆದಿದ್ದ ಸರಕಾರಿ ಮುಖ್ಯಸ್ಥರು ಜೋರಾಗಿ ನಕ್ಕಿದ್ದರು.
‘‘ಅದು ಸುಳ್ಳು ಸುದ್ದಿ. ಆ ಸುದ್ದಿಯನ್ನು ಆ ರೀತಿಯಾಗಿ ವರದಿ ಮಾಡಲಾಗಿದೆ’’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.
Next Story