ಸೌದಿ ಟೀಕಾಕಾರ ಟರ್ಕಿ ಕಾನ್ಸುಲೇಟ್ ಕಚೇರಿಯಲ್ಲಿ ನಾಪತ್ತೆ
ಇಸ್ತಾಂಬುಲ್, ಅ. 3: ಸೌದಿ ಅರೇಬಿಯ ಸರಕಾರದ ಟೀಕಾಕಾರ ಹಾಗೂ ಟರ್ಕಿಯಲ್ಲಿ ದೇಶಭ್ರಷ್ಟ ಜೀವನ ಸಾಗಿಸುತ್ತಿರುವ ಪತ್ರಕರ್ತ ಜಮಾಲ್ ಖಶೋಗಿ, ಮಂಗಳವಾರ ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿ ಪ್ರವೇಶಿಸಿದ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಅವರ ಗೆಳತಿ ಆರೋಪಿಸಿದ್ದಾರೆ.
ಅವರನ್ನು ಕಾನ್ಸುಲೇಟ್ನಲ್ಲಿ ಬಂಧನದಲ್ಲಿಟ್ಟಿರಬಹುದು ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಜಮಾಲ್ ಮತ್ತು ನಾನು ಮಧ್ಯಾಹ್ನ 1 ಗಂಟೆಗೆ ಕಾನ್ಸುಲೇಟ್ ಪ್ರವೇಶಿಸಿದ್ದೇವೆ. ಅವರು ಒಳಗೆ ಕಚೇರಿಗೆ ಹೋದರು. ಆದರೆ, ರಾತ್ರಿ 1 ಗಂಟೆಯವರೆಗೂ ಅವರು ಹೊರಗೆ ಬಂದಿಲ್ಲ ಎಂದು ಗೆಳತಿ ಹೇಳಿದ್ದಾರೆ.
ಅವರ ಮದುವೆಗೆ ದಾಖಲೆಗಳನ್ನು ತರಲು ಜಮಾಲ್ ಸೌದಿ ಕಾನ್ಸುಲೇಟ್ ಪ್ರವೇಶಿಸಿದ್ದರು.
Next Story