ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಪ್ರವೇಶಿಸಿದ ಬೆಂಗಳೂರಿನ ಯುವತಿ ಸನಾ
ಬೆಂಗಳೂರು, ಅ. 6: ಬೆಂಗಳೂರಿನ ಯುವತಿ ಸನಾ ಅಲ್ವೀರ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ)ನಲ್ಲಿ ಒಂದು ವರ್ಷದ ಎಂ.ಎಸ್ಸಿ. ಕೋರ್ಸ್ಗೆ ಸೇರ್ಪಡೆಗೊಂಡಿದ್ದಾರೆ.
ಮುಹಮ್ಮದ್ ಆತಿಫ್ ಮತ್ತು ಅಝ್ರ ಫಾತಿಮಾ ಅವರ ಪುತ್ರಿಯಾಗಿರುವ ಸನಾ ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್ನಿಂದ ಬಿಎ ಪದವಿ ಪಡೆದಿದ್ದಾರೆ.
ಅವರು ಎಲ್ಕೆಜಿಯಿಂದ 12ನೇ ತರಗತಿವರೆಗೆ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್, ಸೌತ್ನಲ್ಲಿ ಅಧ್ಯಯನ ಮಾಡಿದ್ದಾರೆ.
ಅವರು 2015ರಲ್ಲಿ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಹ್ಯುಮೇನಿಟೀಸ್ ವಿಷಯದಲ್ಲಿ ಗರಿಷ್ಠ ಅಂಕಗಳನ್ನು ಪಡೆದಿದ್ದರು. ಅವರು ಇತಿಹಾಸದಲ್ಲಿ 100 ಶೇಕಡ ಅಂಕಗಳನ್ನು ಗಳಿಸಿದರೆ, ಪೊಲಿಟಿಕಲ್ ಸಯನ್ಸ್ನಲ್ಲಿ 98 ಶೇ. ಅಂಕಗಳನ್ನು ಗಳಿಸಿದ್ದರು.
ಅವರು ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ‘ಇಂಟರ್ನ್ಯಾಶನಲ್ ರಿಲೇಶನ್ಸ್’ ವಿಷಯ ಅಧ್ಯಯನ ಮಾಡಲಿದ್ದಾರೆ.
Next Story