ಹೆಂಡತಿಗೆ ಚೂರಿಯ ಚಿತ್ರ ಕಳುಹಿಸಿದ್ದ ಇಂಟರ್ಪೋಲ್ ಮಾಜಿ ಮುಖ್ಯಸ್ಥ
ಲಯಾನ್ (ಫ್ರಾನ್ಸ್), ಅ. 8: ತನ್ನ ಗಂಡ ಚೀನಾದಲ್ಲಿ ನಾಪತ್ತೆಯಾಗುವ ಮುನ್ನ ಚೂರಿಯ ಚಿತ್ರವೊಂದನ್ನು ಕಳುಹಿಸಿದ್ದರು ಹಾಗೂ ಈ ಮೂಲಕ ತಾನು ಅಪಾಯದಲ್ಲಿರುವ ಸೂಚನೆಯನ್ನು ನೀಡಿದ್ದರು ಎಂದು ಚೀನಾದಲ್ಲಿ ಬಂಧನಕ್ಕೊಳಗಾಗಿರುವ ಇಂಟರ್ಪೋಲ್ನ ಮಾಜಿ ಮುಖ್ಯಸ್ಥ ಮೆಂಗ್ ಹೊಂಗ್ವೀಯ ಪತ್ನಿ ಹೇಳಿದ್ದಾರೆ.
ಮೆಂಗ್ ಎಲ್ಲಿದ್ದಾರೆ ಎಂಬ ಕುರಿತ ಊಹಾಪೋಹಗಳ ಬಗ್ಗೆ ಪ್ರಥಮ ಬಾರಿಗೆ ರವಿವಾರ ಸಾರ್ವಜನಿಕ ಹೇಳಿಕೆಯೊಂದನ್ನು ನೀಡಿದ ಅವರ ಪತ್ನಿ ಗ್ರೇಸ್ ಮೆಂಗ್, ಚೂರಿಯ ಚಿತ್ರದ ಮೂಲಕ ತಾನು ಅಪಾಯದಲ್ಲಿದ್ದೇನೆಂಬುದನ್ನು ನನ್ನ ಗಂಡ ಸೂಚಿಸಿರಬಹುದು ಎಂದರು.
ಅವರು ರವಿವಾರ ಇಂಟರ್ಪೋಲ್ನ ಕೇಂದ್ರ ಕಚೇರಿ ಲಯಾನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನನಗೆ ಸೆಪ್ಟಂಬರ್ 25ರಂದು ಚೂರಿಯ ಚಿತ್ರವನ್ನು ಕಳುಹಿಸಲಾಗಿತ್ತು ಹಾಗೂ ಆ ಬಳಿಕ ಗಂಡನೊಂದಿಗೆ ನನಗೆ ಯಾವುದೇ ಸಂಪರ್ಕವಿಲ್ಲ ಎಂದರು.
Next Story