ಪತ್ರಕರ್ತೆಯ ಅತ್ಯಾಚಾರಗೈದು, ಹತ್ಯೆ: ಯುರೋಪ್ ನಾದ್ಯಂತ ತೀವ್ರ ಆಕ್ರೋಶ
ಸೋಫಿಯ (ಬಲ್ಗೇರಿಯ), ಅ. 9: ಬಲ್ಗೇರಿಯಕ್ಕೆ ಒದಗಿಸಲಾದ ಐರೋಪ್ಯ ಒಕ್ಕೂಟ ನಿಧಿಯ ಸಂಭಾವ್ಯ ದುರ್ಬಳಕೆ ಬಗ್ಗೆ ವರದಿ ಮಾಡಿದ್ದ ಟಿವಿ ವರದಿಗಾರ್ತಿಯೊಬ್ಬರನ್ನು ಅತ್ಯಾಚಾರ ಮಾಡಿ ಹತ್ಯೆಗೈಯಲಾಗಿದೆ.
30 ವರ್ಷದ ವಿಕ್ಟೋರಿಯ ಮರಿನೋವ ಅವರ ಮೃತದೇಹವನ್ನು ಡ್ಯಾನ್ಯೂಬ್ ನದಿಯ ಸಮೀಪ ಎಸೆಯಲಾಗಿದೆ.
ರೊಮೇನಿಯ ಗಡಿ ಸಮೀಪದ ರೂಸ್ ಪಟ್ಟಣದಲ್ಲಿ ಶನಿವಾರ ಪತ್ರಕರ್ತೆಯ ದೇಹವನ್ನು ಪೊಲೀಸರು ಪತ್ತೆಹಚ್ಚಿದರು.
ಪತ್ರಕರ್ತೆಯನ್ನು ಅತ್ಯಾಚಾರ ಮಾಡಿ, ಹೊಡೆದು, ಕತ್ತು ಹಿಸುಕಿ ಸಾಯಿಸಲಾಗಿದೆ. ಅವರ ಶವ ನದಿ ಸಮೀಪದ ಪಾರ್ಕೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.
Next Story