ಪಾಕಿಸ್ತಾನ ಐಎಸ್ಐ ಮುಖ್ಯಸ್ಥರಾಗಿ ಆಸಿಮ್ ಮುನೀರ್ ನೇಮಕ
ಇಸ್ಲಾಮಾಬಾದ್, ಅ. 10: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಆಸಿಮ್ ಮುನೀರ್ರನ್ನು ಬುಧವಾರ ನೇಮಿಸಲಾಗಿದೆ.
ಸೇನಾ ಗುಪ್ತಚರ ಪಡೆಯ ಮುಖ್ಯಸ್ಥರಾಗಿದ್ದ ಮುನೀರ್ರನ್ನು ಇತ್ತೀಚೆಗೆ ಲೆಫ್ಟಿನೆಂಟ್ ಜನರಲ್ ದರ್ಜೆಗೆ ಏರಿಸಲಾಗಿತ್ತು.
ಅವರು ಲೆ.ಜ. ನವೀದ್ ಮುಖ್ತರ್ರ ಸ್ಥಾನದಲ್ಲಿ ಬರುತ್ತಾರೆ.
ಮುಖ್ತರ್ 2016 ಡಿಸೆಂಬರ್ನಲ್ಲಿ ಐಎಸ್ಐ ಮಹಾನಿರ್ದೇಶಕನ ಹುದ್ದೆಯನ್ನು ವಹಿಸಿಕೊಂಡಿದ್ದರು.
ಉನ್ನತ ದರ್ಜೆಯ ಹುದ್ದೆಗಳಲ್ಲಿ ಹಲವು ಮಹತ್ವದ ವರ್ಗಾವಣೆಗಳನ್ನೂ ಸೇನೆ ಪ್ರಕಟಿಸಿದೆ.
Next Story