ಬ್ರಿಟನ್: ‘ಆತ್ಮಹತ್ಯಾ ತಡೆ ಸಚಿವ’ರ ನೇಮಕ
ಲಂಡನ್, ಅ. 10: ಆತ್ಮಹತ್ಯೆಗೆ ಶರಣಾಗುವ ಜನರ ಸಂಖ್ಯೆಯನ್ನು ಕಡಿಮೆ ಮಾಡುವ ರಾಷ್ಟ್ರೀಯ ಪ್ರಯತ್ನಗಳ ಭಾಗವಾಗಿ ಬ್ರಿಟನ್ ಪ್ರಧಾನಿ ತೆರೇಸಾ ಮೇ ‘ಆತ್ಮಹತ್ಯಾ ತಡೆ ಸಚಿವ’ರನ್ನು ನೇಮಿಸಿದ್ದಾರೆ.
ಮಾನಸಿಕ ಆರೋಗ್ಯ ಶೃಂಗ ಸಮ್ಮೇಳನಕ್ಕಾಗಿ ಲಂಡನ್ನಲ್ಲಿ 50 ದೇಶಗಳ ಪ್ರತಿನಿಧಿಗಳು ಒಟ್ಟು ಸೇರಿದ ನಡುವೆಯೇ, ಜಾಕೀ ಡಾಯಲ್-ಪ್ರೈಸ್ರನ್ನು ತೆರೇಸಾ ಮೇ ಹೊಸದಾಗಿ ಸೃಷ್ಟಿಸಲಾದ ಸಚಿವ ಹುದ್ದೆಯ ಉಸ್ತುವಾರಿ ಎಂಬುದಾಗಿ ಘೋಷಿಸಿದ್ದಾರೆ.
‘ಸಾಮರಿಟನ್ಸ್’ ದತ್ತಿ ಸಂಸ್ಥೆಯು ಉಚಿತ ಸಮಾಲೋಚನೆ ಹಾಟ್ಲೈನ್ ಸೇವೆಯನ್ನು ಮುಂದುವರಿಸಲು ಸಾಧ್ಯವಾಗುವಂತೆ 1.8 ಮಿಲಿಯ ಪೌಂಡ್ (ಸುಮಾರು 18 ಕೋಟಿ ರೂಪಾಯಿ) ನಿಧಿಯನ್ನು ಒದಗಿಸುವುದಾಗಿಯೂ ಪ್ರಧಾನಿ ಈ ಸಂದರ್ಭದಲ್ಲಿ ಘೋಷಿಸಿದರು.
Next Story