ಸಿರಿಯದಲ್ಲಿ ಇರಾನ್ ನ ಉಪಸ್ಥಿತಿ ಮುಂದುವರಿದರೆ ಪುನರ್ ನಿರ್ಮಾಣಕ್ಕೆ ನೆರವು ಇಲ್ಲ: ಅಮೆರಿಕ
ವಾಶಿಂಗ್ಟನ್, ಅ. 12: ಸಿರಿಯದಲ್ಲಿ ಇರಾನ್ನ ಉಪಸ್ಥಿತಿ ಮುಂದುವರಿದರೆ, ಯುದ್ಧಾನಂತರದ ಪುನರ್ನಿರ್ಮಾಣಕ್ಕೆ ಯಾವುದೇ ನೆರವು ನೀಡುವುದಿಲ್ಲ ಎಂದು ಅಮೆರಿಕ ಎಚ್ಚರಿಸಿದೆ.
ಇಸ್ರೇಲ್ ಪರವಾಗಿರುವ ಗುಂಪಿನ ಜೊತೆ ಮಾತನಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಮಧ್ಯಪ್ರಾಚ್ಯದಾದ್ಯಂತ ಇರಾನನ್ನು ಪ್ರತಿಬಂಧಿಸಲು ಆಕ್ರಮಣಕಾರಿ ಧೋರಣೆಯನ್ನು ಅನುಸರಿಸಲಾಗುವುದು ಎಂದು ಹೇಳಿದರು.
‘‘ಸಿರಿಯದಿಂದ ಇರಾನನ್ನು ಹೊರದಬ್ಬುವ ಜವಾಬ್ದಾರಿ ಸಿರಿಯ ಸರಕಾರದ ಮೇಲಿದೆ. ಇರಾನ್ ಉಪಸ್ಥಿತಿಗೆ ಜವಾಬ್ದಾರಿಯನ್ನು ಅದೇ ಹೊರಲಿದೆ’’ ಎಂದು ಪಾಂಪಿಯೊ ನುಡಿದರು.
Next Story