ಇಸ್ರೇಲ್ ಸೈನಿಕರಿಂದ ಗುಂಡು: ಗಾಝಾ ಗಡಿಯಲ್ಲಿ 5 ಫೆಲೆಸ್ತೀನಿಯರ ಸಾವು
ಗಾಝಾ ಸಿಟಿ, ಅ. 13: ಗಾಝಾ-ಇಸ್ರೇಲ್ ಗಡಿಯಲ್ಲಿ ಶುಕ್ರವಾರ ಸಂಭವಿಸಿದ ಹಿಂಸಾಚಾರದಲ್ಲಿ ಐವರು ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ.
ಪ್ರತಿಭಟನೆಯ ಭಾಗವಾಗಿ ಸಾವಿರಾರು ಫೆಲೆಸ್ತೀನಿಯರು ಇಸ್ರೇಲ್ ಗಡಿಯತ್ತ ಚಲಿಸಿದಾಗ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ ಅವರು ಬಲಿಯಾದರು ಎಂದು ಗಾಝಾಪಟ್ಟಿಯ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಗಡಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಸುಮಾರು 14,000 ‘ಗಲಭೆಕೋರರು ಮತ್ತು ಪ್ರದರ್ಶನಕಾರರು’ ಜಮಾಯಿಸಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ.
Next Story