11,700 ಕೋಟಿ ರೂ. ಲಾಟರಿ ಗೆದ್ದ ಅದೃಷ್ಟವಂತ!
ವಾಶಿಂಗ್ಟನ್, ಅ. 24: ಅದೃಷ್ಟವಂತರೊಬ್ಬರು ದಾಖಲೆಯ 1.6 ಬಿಲಿಯ ಡಾಲರ್ (ಸುಮಾರು 11,700 ಕೋಟಿ ರೂಪಾಯಿ) ಮೊತ್ತದ ಮೆಗಾ ಮಿಲಿಯನ್ಸ್ ಜಾಕ್ಪಾಟ್ ಲಾಟರಿಯನ್ನು ಮಂಗಳವಾರ ರಾತ್ರಿ ಗೆದ್ದಿದ್ದಾರೆ ಎಂದು ಲಾಟರಿ ಅಧಿಕಾರಿಗಳು ಹೇಳಿದ್ದಾರೆ.
ಸೌತ್ ಕರೋಲಿನದಲ್ಲಿ ಖರೀದಿಸಲಾದ ಒಂದು ಟಿಕೆಟ್ ಮಂಗಳವಾರ ರಾತ್ರಿ ನಡೆದ ಡ್ರಾದಲ್ಲಿ ಬಂದ ಎಲ್ಲ ಆರು ಸಂಖ್ಯೆಗಳನ್ನು ಹೊಂದಿದೆ. ಇದು ಜಗತ್ತಿನ ಈವರೆಗಿನ ಅತ್ಯಂತ ದೊಡ್ಡ ಲಾಟರಿ ಬಹುಮಾನ ಮೊತ್ತವಾಗಿದೆ. ಆದಾಗ್ಯೂ, ಈ ಅದೃಷ್ಟಶಾಲಿ ಯಾರು ಎನ್ನುವುದನ್ನು ಜಗತ್ತು ತಿಳಿಯದೇ ಹೋಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಸೌತ್ ಕರೋಲಿನ ಮತ್ತು ಇತರ 7 ದೇಶಗಳಲ್ಲಿ ಲಾಟರಿ ವಿಜೇತರು ಅನಾಮಿಕರಾಗಿಯೇ ಉಳಿಯಲು ಅವಕಾಶವಿದೆ.
Next Story