ಭಾರತ, ಜಪಾನ್ ಮೇಲೆ ಚೀನಾದಿಂದ ದಬ್ಬಾಳಿಕೆ: ಅಮೆರಿಕ ಕಾಂಗ್ರೆಸ್ನ ವರದಿ
ವಾಶಿಂಗ್ಟನ್, ನ. 15: ಭಾರತ ಮತ್ತು ಜಪಾನ್ ಮುಂತಾದ ಅಮೆರಿಕದ ಮಿತ್ರದೇಶಗಳ ಮೇಲೆ ಚೀನಾ ‘ನ್ಯಾಯಸಮ್ಮತವಲ್ಲದ’ ಪ್ರಭಾವ ಬೀರುತ್ತಿದೆ ಹಾಗೂ ಇದು ಅಮೆರಿಕದ ಮೇಲ್ಮೆಗೆ ಸವಾಲಾಗಿದೆ ಎಂದು ವರದಿಯೊಂದು ಹೇಳಿದೆ.
‘‘ಅಮೆರಿಕದ ಸುರಕ್ಷತೆ ಮತ್ತು ಕ್ಷೇಮಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಅಪಾಯ ಎದುರಾಗಿದೆ’’ ಎಂದು ಅಮೆರಿಕದ ಕಾಂಗ್ರೆಸ್ನ ಆದೇಶದಂತೆ ಸಿದ್ಧಪಡಿಸಲಾಗಿರುವ ವರದಿ ತಿಳಿಸಿದೆ.
ಎದುರಾಳಿಗಳು ಮತ್ತು ವಿರೋಧಿಗಳು ಹಲವು ವಿಷಯಗಳಲ್ಲಿ ಅಮೆರಿಕಕ್ಕೆ ಸವಾಲೊಡ್ಡುತ್ತಿದ್ದಾರೆ ಎಂದು ಅದು ಅಭಿಪ್ರಾಯಪಟ್ಟಿದೆ.
ತನ್ನ ಮಿತ್ರರು, ಭಾಗೀದಾರರು ಮತ್ತು ತನ್ನದೇ ಪ್ರಮುಖ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಅಮೆರಿಕದ ಸಾಮರ್ಥ್ಯದ ಬಗ್ಗೆ ದಿನೇ ದಿನೇ ಸಂಶಯಗಳು ಹುಟ್ಟುತ್ತಿವೆ ಎಂದಿದೆ.
ಈ ಪರಿಸ್ಥಿತಿಯನ್ನು ಸುಧಾರಿಸಲು ಅಮೆರಿಕ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅದರ ಪರಿಣಾಮ ಭೀಕರವಾಗಿರುತ್ತದೆ ಹಾಗೂ ಶಾಶ್ವತವಾಗಿರುತ್ತದೆ ಎಂದು ವರದಿ ಹೇಳಿದೆ.
Next Story