ಅಲಬಾಮದಲ್ಲಿ ಗುಂಡಿನ ಹಾರಾಟ: 1 ಸಾವು; ಇಬ್ಬರಿಗೆ ಗಾಯ
ಹೂವರ್ (ಅಲಬಾಮ), ನ. 24: ಅಮೆರಿಕದ ಅಲಬಾಮ ರಾಜ್ಯದ ವ್ಯಾಪಾರಿ ಸಂಕೀರ್ಣವೊಂದರಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ಹಾರಾಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಬಳಿಕ ಪೊಲೀಸರು ಹಾರಿಸಿದ ಗುಂಡಿಗೆ ಬಂದೂಕುಧಾರಿ ಬಲಿಯಾಗಿದ್ದಾನೆ. ಹೂವರ್ ನಗರದಲ್ಲಿರುವ ವ್ಯಾಪಾರ ಸಂಕೀರ್ಣದಲ್ಲಿ ಇಬ್ಬರು ಯುವಕರು ಹೊಡೆದಾಡಿಕೊಳ್ಳುತ್ತಿದ್ದರು. ಅವರ ಪೈಕಿ ಓರ್ವ ಬಂದೂಕು ತೆಗೆದು ಎದುರಾಳಿಗೆ ಗುಂಡು ಹಾರಿಸಿದ್ದು ಅವನು ಗಾಯಗೊಂಡನು.
ಪೊಲೀಸರು ಧಾವಿಸಿ ಬಂದೂಕುಧಾರಿಯತ್ತ ಗುಂಡು ಹಾರಿಸಿದರು. ಅವನು ಸ್ಥಳದಲ್ಲೇ ಮೃತಪಟ್ಟನು. ಬಂದೂಕುಧಾರಿ ಹಾರಿಸಿದ ಗುಂಡು ತಾಗಿ ಸಮೀಪದಲ್ಲಿದ್ದ 12 ವರ್ಷದ ಬಾಲಕಿಯೊಬ್ಬಳೂ ಗಾಯಗೊಂಡಿದ್ದಾಳೆ.
Next Story