ಕೂದಲೆಳೆಯಿಂದ ರೈಲಿನಡಿ ಬೀಳುವುದರಿಂದ ಪಾರಾದ ಸೈಕಲಿಸ್ಟ್
ಆಮ್ಸ್ಟರ್ಡಮ್, ನ.30: ರಕ್ಷಣೆಯಿಲ್ಲದ ರೈಲ್ವೆ ಕ್ರಾಸಿಂಗ್ಗಳು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇವೆ. ರೈಲ್ವೆ ಹಳಿ ದಾಟುವವರು ಸ್ವಲ್ಪವೂ ನಿರ್ಲಕ್ಷ ತೋರಬಾರದು ಎನುವುದಕ್ಕೆ ಹಾಲೆಂಡ್ ರೈಲ್ವೆ ಮೂಲಭೂತ ಸೌಕರ್ಯ ಸಂಸ್ಥೆ ಹಂಚಿಕೊಂಡಿರುವ ಈ ವಿಡಿಯೋ ಸಾಕ್ಷಿ.
ಮೈ ಜುಮ್ಮೆನಿಸುವ ಈ ವಿಡಿಯೋದಲ್ಲಿ ಸೈಕಲಿಸ್ಟ್ ಓರ್ವ ವೇಗವಾಗಿ ಬರುತ್ತಿದ್ದ ರೈಲಿನಡಿ ಬಿದ್ದು ಸಾವನ್ನಪ್ಪುವ ಅಪಾಯದಿಂದ ಕೆಲವೇ ಸೆಕೆಂಡ್ನಲ್ಲಿ ಪಾರಾಗಿದ್ದಾನೆ. ವಾರದ ಹಿಂದೆ ಆನ್ಲೈನ್ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಸೈಕಲಿಸ್ಟ್ ಓರ್ವ ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ಒಂದು ಕಡೆಯಿಂದ ಬರುತ್ತಿದ್ದ ರೈಲಿಗಾಗಿ ಕಾದು ಅದು ಹೋದ ಬಳಿಕ ರೈಲು ಹಳಿ ದಾಟಲು ಮುಂದಾದ. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ರೈಲು ಬರುತ್ತಿತ್ತು. ಸೈಕಲಿಸ್ಟ್ ರೈಲು ಹಳಿ ಮೇಲೆ ಇದ್ದಾಗ ರೈಲು ಬರುತ್ತಿರುವುದು ಆತನ ಗಮನಕ್ಕೆ ಬಂದಿತ್ತು. ವೇಗವಾಗಿ ಹಳಿ ದಾಟಿದ ಸೈಕಲಿಸ್ಟ್ ಕೂದಲೆಳೆ ಅಂತರದಿಂದ ರೈಲಿನಡಿಗೆ ಬೀಳುವ ಅಪಾಯದಿಂದ ಪಾರಾಗಿದ್ದಾನೆ.
ದೇಶದಲ್ಲಿ ಎಲ್ಲ ರೈಲು ಹಳಿಗಳಲ್ಲಿ ಸುರಕ್ಷತೆ ಅಗತ್ಯವಿದೆ ಎಂದು ಹಾಲೆಂಡ್ನಲ್ಲಿ ರೈಲು ಕ್ರಾಸಿಂಗ್ನಲ್ಲಿ ಸುರಕ್ಷತೆ ಕೊರತೆ ಬಗ್ಗೆ ಹೋರಾಡುತ್ತಿರುವ ಪ್ರೊ ರೈಲ್ ಸಂಘಟನೆ ತಿಳಿಸಿದೆ.