‘ಅಮೆರಿಕನ್ನರು ಹೆಚ್ಚು ಇಷ್ಟಪಡುವ ಮಹಿಳೆ’ ಯಾರು ಗೊತ್ತೇ ?
17 ವರ್ಷಗಳ ಹಿಲರಿ ಕ್ಲಿಂಟನ್ ಓಟಕ್ಕೆ ತಡೆ
ವಾಶಿಂಗ್ಟನ್, ಡಿ. 28: ‘ಅಮೆರಿಕನ್ನರು ಹೆಚ್ಚು ಇಷ್ಟಪಡುವ ಮಹಿಳೆ’ ಎಂಬ ಮಾಜಿ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್ರ 17 ವರ್ಷಗಳ ಹೆಗ್ಗಳಿಕೆ ಕೊನೆಗೊಂಡಿದೆ.
ಈಗ ಆ ಹೆಗ್ಗಳಿಕೆಯನ್ನು ಇನ್ನೋರ್ವ ಪ್ರಥಮ ಮಹಿಳೆ ಮಿಶೆಲ್ ಒಬಾಮ ಪಡೆದುಕೊಂಡಿದ್ದಾರೆ. ಗುರುವಾರ ಪ್ರಕಟಗೊಂಡ ‘ಗಾಲಪ್’ ಸಮೀಕ್ಷೆಯಲ್ಲಿ ಈ ರೀತಿ ಹೇಳಲಾಗಿದೆ.
‘ಗಾಲಪ್’ ಸಂಸ್ಥೆಯು 1946ರಿಂದ, 1976ನ್ನು ಹೊರತುಪಡಿಸಿ ಪ್ರತಿ ವರ್ಷ ಈ ಸಮೀಕ್ಷೆ ನಡೆಸಿಕೊಂಡು ಬರುತ್ತಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ 1,025 ಅಮೆರಿಕನ್ನರ ಪೈಕಿ 15 ಶೇಕಡ ಮಂದಿ, ತಾವು ಮಿಶೆಲ್ ಒಬಾಮರನ್ನು ಹೆಚ್ಚು ಇಷ್ಟಪಡುವುದಾಗಿ ಹೇಳಿದ್ದಾರೆ.
5 ಶೇಕಡ ಮತಗಳೊಂದಿಗೆ, ‘ಟಾಕ್ ಶೋ’ ನಿರೂಪಕಿ ಓಪ್ರಾ ವಿನ್ಫ್ರೇ ಎರಡನೇ ಸ್ಥಾನದಲ್ಲಿದ್ದರೆ, 4 ಶೇಕಡ ಮತಗಳೊಂದಿಗೆ ಮಾಜಿ ವಿದೇಶಾಂಗ ಕಾರ್ಯದರ್ಶಿಯೂ ಆಗಿರುವ ಹಿಲರಿ ಮೂರನೇ ಸ್ಥಾನದಲ್ಲಿದ್ದಾರೆ.
Next Story