ರಾಜಕಾರಣ ಪ್ರವೇಶಿಸಲು ಆ್ಯಂಜೆಲಿನಾ ಜೋಲಿ ಇಂಗಿತ
ವಾಶಿಂಗ್ಟನ್,ಡಿ.30: ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವ ಬಗ್ಗೆ ತಾನು ಗಂಭೀರವಾಗಿ ಯೋಚಿಸುತ್ತಿರುವುದಾಗಿ ಖ್ಯಾತ ಹಾಲಿವುಡ್ ನಟಿ ಹಾಗೂ ಮಾನವಹಕ್ಕುಗಳ ಹೋರಾಟಗಾರ್ತಿ ಆ್ಯಂಜೆಲಿನಾ ಜೋಲಿ ಹೇಳಿದ್ದಾರೆ.
ಬಿಬಿಸಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆ್ಯಂಜೆಲಿನಾ ಅವರನ್ನು ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಹಂಬಲವಿದೆಯೇ ಎಂದು ಪ್ರಶ್ನಿಸಿದಾಗ ಆಕೆ ಹೀಗೆ ಪ್ರತಿಕ್ರಿಯಿಸಿದ್ದಾರೆ.
‘‘ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವ ಕುರಿತಾಗಿ, ಒಂದು ವೇಳೆ 20 ವರ್ಷಗಳ ಹಿಂದೆ ತನ್ನ ಬಳಿ ಈ ಪ್ರಶ್ನೆಯನ್ನು ಕೇಳಿರುತ್ತಿದ್ದಲ್ಲಿ ಆಗ ನಾನು ನಕ್ಕುಬಿಡುತ್ತಿದ್ದೆ ಆದರೆ ಈಗ ರಾಜಕಾರಣದಲ್ಲಿ ಸಕ್ರಿಯವಾಗುವುದು ತನ್ನ ಬಾಧ್ಯತೆಯಾಗಿದೆಯೆಂದು ಭಾವಿಸಿರುವುದಾಗಿ” ಆ್ಯಂಜೆಲಿನಾ ಹೇಳಿದ್ದಾರೆ.
ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ವಿರುದ್ಧ ಹಾಗೂ ನಿರಾಶ್ರಿತರ ಸಮಸ್ಯೆಗಳ ಬಗ್ಗೆ ಆ್ಯಂಜೆಲಿನಾ ಜೋಲಿ ಜಾಗತಿಕ ಮಟ್ಟದಲ್ಲಿ ಪ್ರಬಲವಾದ ಧ್ವನಿಯಾಗಿದ್ದಾರೆ.
Next Story