ಪ್ರಾಥಮಿಕ ಶಾಲೆಯ ಮೇಲೆ ದಾಳಿ; 20 ಮಕ್ಕಳಿಗೆ ಗಾಯ
ಬೀಜಿಂಗ್, ಜ. 8: ಚೀನಾ ರಾಜಧಾನಿ ಬೀಜಿಂಗ್ನ ಪ್ರಾಥಮಿಕ ಶಾಲೆಯೊಂದರ ಮೇಲೆ ಮಂಗಳವಾರ ನಡೆದ ದಾಳಿಯಲ್ಲಿ 20 ಮಕ್ಕಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಓರ್ವ ಪುರುಷ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಕ್ಸಿಚೆಂಗ್ ಜಿಲ್ಲಾಡಳಿತ ತಿಳಿಸಿದೆ.
ಆದರೆ, ಆ ವ್ಯಕ್ತಿಯು ಯಾಕೆ ಮತ್ತು ಹೇಗೆ ದಾಳಿ ನಡೆಸಿದನು ಎಂಬ ವಿವರವನ್ನು ಅದು ನೀಡಿಲ್ಲ.
ಆರೋಪಿಯು ಸುತ್ತಿಗೆಯಿಂದ ದಾಳಿ ನಡೆಸಿದನು ಎಂದು ಸರಕಾರಿ ಪರ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
Next Story