ಸಿಂಗಾಪುರ: ಭಾರತ ಮೂಲದ ವ್ಯಕ್ತಿಯಿಂದ ಪ್ರೇಮಿಯ ಕೊಲೆ
ಸಿಂಗಾಪುರ, ಜ. 18: ಭಾರತ ಮೂಲದ 34 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಸಿಂಗಾಪುರ ಪೊಲೀಸರು ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಆರೋಪವನ್ನು ಹೊರಿಸಿದ್ದಾರೆ.
ಸಿಂಗಾಪುರದ ವುಡ್ಲ್ಯಾಂಡ್ಸ್ನಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ 40 ವರ್ಷದ ಶವ ಪತ್ತೆಯಾಗಿದೆ.
ಈ ಮಹಿಳೆಯನ್ನು ಎಂ. ಕೃಷ್ಣನ್ ಬುಧವಾರ ರಾತ್ರಿ ಕೊಲೆ ಮಾಡಿದ್ದಾರೆ ಎಂಬುದಾಗಿ ಪೊಲೀಸ್ ದಾಖಲೆಗಳಲ್ಲಿ ನಮೂದಾಗಿದೆ.
ಈ ಇಬ್ಬರು ಪರಸ್ಪರ ಪರಿಚಿತರಾಗಿದ್ದರು ಹಾಗೂ ಪ್ರೇಮಸಂಬಂಧ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅವರು ಯಾವಾಗಲೂ ಜಗಳ ಮಾಡುತ್ತಿದ್ದರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಕೊಲೆ ಆರೋಪ ಸಾಬೀತಾದರೆ, ಕೃಷ್ಣನ್ ಮರಣ ದಂಡನೆಯನ್ನು ಎದುರಿಸಬೇಕಾಗುತ್ತದೆ.
Next Story