ಮಲೇಶ್ಯ: ಸಿಖ್ ಮಹಿಳೆ, ಮಗು ಹತ್ಯೆ
ಕೌಲಾಲಂಪುರ, ಎ. 16: ಭಾರತೀಯ ಮೂಲದ 33 ವರ್ಷದ ಸಿಖ್ ಮಹಿಳೆ ಮತ್ತು ಅವರ ಏಳು ತಿಂಗಳ ಪ್ರಾಯದ ಮಗಳು ಮಲೇಶ್ಯದಲ್ಲಿನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಹಾಗೂ ಪೊಲೀಸರು ಅವರ ಗಂಡನನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಮಲೇಶ್ಯದ ಸೆಲಂಗರ್ ರಾಜ್ಯದಲ್ಲಿನ ರವಂಗ್ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ಕಮಲ್ಜಿತ್ ದುರೈರಾಜ ಮತ್ತು ಆಕೆಯ ಮಗಳು ಇಶ್ಲಿನ್ ಕೌರ್ ಗುರುವಾರ ಶವವಾಗಿ ಪತ್ತೆಯಾಗಿದ್ದರು.
ಅವರ ಸಾವಿಗೆ ನಿಖರ ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲವಾದರೂ, ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ‘ಮಲಯ್ ಮೇಲ್ ಆನ್ಲೈನ್’ ವರದಿ ಮಾಡಿದೆ.
ಶವಗಳನ್ನು ಮೊದಲು ನೋಡಿದ ಮಹಿಳೆಯ ಮಾವ ಪೊಲೀಸರಿಗೆ ಮಾಹಿತಿ ನೀಡಿದರು.
ಆರಂಭಿಕ ತನಿಖೆಗಳ ಬಳಿಕ ಪೊಲೀಸರು ಮಹಿಳೆಯ ಲಾರಿ ಚಾಲಕ ಗಂಡನನ್ನು ಅವಳಿ ಕೊಲೆಗಳಿಗೆ ಸಂಬಂಧಿಸಿ ಬಂಧಿಸಿದ್ದಾರೆ.
Next Story