ಹಫೀಝ್ ಸಯೀದ್ ನ ಜಮಾತುದ್ದಾವಾ ಸಂಘಟನೆಯನ್ನು ನಿಷೇಧಿಸಿದ ಪಾಕಿಸ್ತಾನ
ಇಸ್ಲಾಮಾಬಾದ್,ಫೆ.21: 2008ರ ಮುಂಬೈ ದಾಳಿ ಸಂಚುಕೋರ ಹಫೀಝ್ ಸಯೀದ್ ನೇತೃತ್ವದ ಜಮಾತುದ್ ದಾವಾ ಹಾಗೂ ಅದರ ಆರ್ಥಿಕ ನೆರವು ವಿಭಾಗ ಫಲಹೇ ಇನ್ಸಾನಿಯತ್ ಪ್ರತಿಷ್ಠಾನಕ್ಕೆ ಪಾಕಿಸ್ತಾನ ಗುರುವಾರ ನಿಷೇಧ ಹೇರಿದೆ.
ಗುರುವಾರ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಈ ಸಂಘಟನೆಗಳಿಗೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಆಂತರಿಕ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ. ಈ ಹಿಂದೆ ಈ ಎರಡು ಸಂಘಟನೆಗಳನ್ನು ಆಂತರಿಕ ಸಚಿವಾಲಯದ ನಿಗಾಪಟ್ಟಿಯಲ್ಲಿ ಇಡಲಾಗಿತ್ತು. ಇದೀಗ ಇವುಗಳನ್ನು ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟ ಸಂಘಟನೆಗಳೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story