ಚೀನಾ: ಪಾಕ್ನಿಂದ ಬರುವ, ಹೋಗುವ ಎಲ್ಲ ವಿಮಾನಗಳು ರದ್ದು
ಬೀಜಿಂಗ್, ಮಾ. 1: ಪಾಕಿಸ್ತಾನದಿಂದ ಬರುವ ಮತ್ತು ಅಲ್ಲಿಗೆ ಹೋಗುವ ಎಲ್ಲ ವಿಮಾನಗಳನ್ನು ಚೀನಾ ರದ್ದುಪಡಿಸಿದೆ ಹಾಗೂ ಪಾಕಿಸ್ತಾನ ವಾಯುಪ್ರದೇಶದ ಮೂಲಕ ಹಾದು ಹೋಗುವ ತನ್ನ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳನ್ನು ಅದು ಬೇರೆ ದಾರಿಯ ಮೂಲಕ ಕಳುಹಿಸಿದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಚೀನಾ ಈ ಕ್ರಮ ತೆಗೆದುಕೊಂಡಿದೆ.
ಪಾಕಿಸ್ತಾನ ಮತ್ತು ಭಾರತ-ಪಾಕಿಸ್ತಾನ ಗಡಿಯ ಮೂಲಕ ಸಾಮಾನ್ಯವಾಗಿ ಹಾರುವ ಮಧ್ಯಪ್ರಾಚ್ಯದ ವಿಮಾನಗಳು ಈಗ ಭಾರತ, ಮ್ಯಾನ್ಮಾರ್ ಅಥವಾ ಮಧ್ಯ ಏಶ್ಯದ ಮೂಲಕ ಚೀನಾ ಪ್ರವೇಶಿಸಬೇಕಾಗಿದೆ ಎಂದು ವಾಯುಯಾನ ಪರಿಣತರು ‘ಗ್ಲೋಬಲ್ ಟೈಮ್ಸ್’ಗೆ ಹೇಳಿದ್ದಾರೆ.
ಅದೇ ವೇಳೆ, ಪಾಕಿಸ್ತಾನವು ತನ್ನ ವಾಯು ಪ್ರದೇಶವನ್ನು ಮುಚ್ಚಿದ ಬಳಿಕ, ಅಂತರ್ರಾಷ್ಟ್ರೀಯ ವಿಮಾನಗಳ ಹಾರಾಟಕ್ಕಾಗಿ ಚೀನಾವು ತನ್ನ ವಾಯುಪ್ರದೇಶದ ಸ್ವಲ್ಪ ಭಾಗವನ್ನು ತೆರೆದಿದೆ.
Next Story