ಪಾಕ್ ಜಲಪ್ರದೇಶಕ್ಕೆ ನುಗ್ಗುವ ಭಾರತೀಯ ಸಬ್ಮರೀನ್ ಯತ್ನ ವಿಫಲ: ಪಾಕ್ ನೌಕಾಪಡೆ ಹೇಳಿಕೆ
ಕರಾಚಿ, ಮಾ. 5: ಪಾಕಿಸ್ತಾನದ ಜಲಪ್ರದೇಶದೊಳಗೆ ಪ್ರವೇಶಿಸಲು ಯತ್ನಿಸಿದ ಭಾರತೀಯ ಸಬ್ಮರೀನ್ನ ಪ್ರಯತ್ನವನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಪಾಕಿಸ್ತಾನದ ನೌಕಾಪಡೆ ಮಂಗಳವಾರ ಹೇಳಿದೆ.
ಇದಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನೂ ಪಾಕಿಸ್ತಾನಿ ನೌಕಾಪಡೆ ಬಿಡುಗಡೆ ಮಾಡಿದೆ. ಇದು ನೈಜ ವೀಡಿಯೊ ಎಂಬುದಾಗಿ ಅದು ಹೇಳಿಕೊಂಡಿದೆ.
‘‘ಭಾರತೀಯ ಸಬ್ಮರೀನ್ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸುವುದನ್ನು ಪಾಕಿಸ್ತಾನಿ ನೌಕಾಪಡೆ ಯಶಸ್ವಿಯಾಗಿ ತಡೆಯಿತು ಹಾಗೂ ಇದಕ್ಕಾಗಿ ಅದು ವಿಶೇಷ ಕೌಶಲ್ಯಗಳನ್ನು ಪ್ರಯೋಗಿಸಿತು’’ ಎಂದು ಪಾಕ್ ನೌಕಾಪಡೆಯ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದರು.
ಶಾಂತಿ ಸ್ಥಾಪನೆಗೆ ಒಂದು ಅವಕಾಶ ಕೊಡುವ ಪ್ರಯತ್ನವಾಗಿ, ಭಾರತೀಯ ಸಬ್ಮರೀನ್ ಮೇಲೆ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಆಕ್ರಮಣ ನಡೆಸಲಿಲ್ಲ ಎಂದು ಅವರು ಹೇಳಿಕೊಂಡರು.
‘‘ಈ ಘಟನೆಯಿಂದ ಭಾರತ ಪಾಠ ಕಲಿಯಬೇಕು ಹಾಗೂ ಶಾಂತಿಯತ್ತ ಹೊರಳಬೇಕು’’ ಎಂದರು.
Next Story